ಕಲಾಜೀವನ: 40 ವರ್ಷಗಳಿಂದ ರಂಗಭೂಮಿ, ಕಿರುತೆರೆ, ಸಿನಿಮಾಗಳಲ್ಲಿ ನಿರಂತರವಾಗಿ ಅಭಿನಯ. ನೂರಾರು ನಾಟಕಗಳಲ್ಲಿ, ಸುಮಾರು 500 ಚಲನಚಿತ್ರಗಳಲ್ಲಿ, ಹತ್ತು ಸಾವಿರಕ್ಕೂ ಹೆಚ್ಚು ಟಿವಿ ಎಪಿಸೋಡ್ ಗಳಲ್ಲಿ ಪಾತ್ರ ಮಾಡಿರೋದು.
ಶಾಲಾ ದಿನಗಳಿಂದಲೇ ಮೂಲತಹ ರಂಗಭೂಮಿಯ ನಟನಾಗಿ ನೂರಾರು ನಾಟಕಗಳ ಸಾವಿರಾರು ಪ್ರದರ್ಶನಗಳಲ್ಲಿ ಅಭಿನಯಿಸಿರುವುದು.
ಪ್ರಶಸ್ತಿಗಳು: ಆರ್ಯಭಟ, ಪುನೀತ್ ಸೇವಾರತ್ನ, ಕಲಾಕಿರಣ, ಕಾಯಕ ಶ್ರೀ, ಕರ್ನಾಟಕ ವಿಕಾಸ ರತ್ನ, ಕಲಾಕೇಸರಿ, ವಿಶ್ವಗುರು ಬಸವ ಶ್ರೀ, ವೈದಿಕ ಗುಣನಿಧಿ, ಕನ್ನಡ ಸೇವಾರತ್ನ, ಪುರೋಹಿತ ರತ್ನ, .... ಹೀಗೆ ಹಲವಾರು ಪ್ರಶಸ್ತಿಗಳು
ದಿಗ್ವಿಜಯ, ಪ್ರಜಾರಾಜ್ಯ, ಹಳ್ಳಿ ಮುಖ, ಚೇರ್ಮನ್, ದೂರದರ್ಶನ, ಲೇಡೀಸ್ ಬಾರ್, ಮೂರ್ಖತೆ, ನಂಜುಂಡಿ, ವಿಕ್ಟರಿ 2, ನಾವಿಕ, ಪರಾರಿ, ಗಾಡ್ ಫಾದರ್, ಸೂಪರ್ ರಂಗ, ಆಟೋ ಶಂಕರ್, ಸಾರಥಿ, ವಂಶೋದ್ಧಾರಕ, ಅಮರಾವತಿ, ಜಟ್ಟ, ಬ್ಯೂಟಿಫುಲ್ ಮನಸುಗಳು, ತಿರುಪತಿ ಎಕ್ಸ್ ಪ್ರೆಸ್, ಶಿವಲಿಂಗ, ಮೈತ್ರಿ, ಶಶಿಕಲಾ w/0 ಪುಟ್ಟರಾಜು, ಅಮ್ಮಾ ಐ ಲವ್ ಯೂ, ಸಿದ್ದಗಂಗಾ, ಜ್ಞಾನ ಜ್ಯೋತಿ ಸಿದ್ದಗಂಗಾ, ಮಹಾಶಕ್ತಿ ಮಹಾಮಾಯೆ, ಸಚ್ಚಿ, ನಟ, ಶಕ್ತಿ, ಟೈಗರ್ ಪದ್ಮಿನಿ, ಮನಸುಗಳ ಮಾತು ಮಧುರ, ಕೈವಾರ ತಾತಯ್ಯ, ಅಂಬೇಡ್ಕರ್, ಗುರುಕುಲ, ಪರಾರಿ, ಆದ್ಯ, ಕಾಲಜ್ಞಾನ, ಲಕ್ಷ್ಯ, ಸಿದ್ಧಲಿಂಗು, ಅರಳಿದ ಹೂವುಗಳು, ಹಳ್ಳಿ ಹೈಕ್ಳ ಪ್ಯಾಟೆ ಲೈಫು, ಧೀರಂ, ಸರ್ಕಾರಿ ಶಾಲೆ, ಅಮಾಸ, ಆಚಾರ್ಯ ಶ್ರೀ ಶಂಕರ, ಪ್ರೇಮವ್ಯೂಹ, ಅವನೊಬ್ಬನೇ, ಕಾಳಿದಾಸ ಕನ್ನಡ ಮೇಷ್ಟ್ರು, ವಜ್ರಾಸ್ತ್ರ, ತ್ಯಾಗಮಯಿ, ನಮ್ಮೂರಲ್ಲಿ ರಾಜ ರಾಣಿ, ಅಭಿಮನ್ಯು, ಮುಂತಾದ ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳ ವಿವಿಧ ಪಾತ್ರಗಳಲ್ಲಿ ಅಭಿನಯ.
ಡಾ.ರಾಜಕುಮಾರ್, ಕಲ್ಯಾಣ ಕುಮಾರ್, MP ಶಂಕರ್, ರಾಜೇಶ್, ಲೋಕೇಶ್, ಲೋಕನಾಥ್, ಶ್ರೀನಿವಾಸಮೂರ್ತಿ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಶಿವರಾಮಣ್ಣ, MS ಉಮೇಶಣ್ಣ, ರಮೇಶ್ ಭಟ್, ಭಾರತಿ ವಿಷ್ಣುವರ್ಧನ್, ಜಯಂತಿ, ಗಿರಿಜೆಲೋಕೇಶ್, RT ರಮಾ ಮುಂತಾದ ಹಿರಿಯ ನಟರು ಮಾತ್ರವಲ್ಲದೆ
ಶಿವರಾಜ್ ಕುಮಾರ್, ದರ್ಶನ್, ಉಪೇಂದ್ರ, ಗಣೇಶ್, ಶರಣ್, ದುನಿಯಾ ವಿಜಯ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ಶ್ರೀನಗರ ಕಿಟ್ಟಿ, ಯೋಗಿ (ಲೂಸ್ ಮಾದ) ಮುಂತಾದ ನಾಯಕ ನಟರೊಡನೆ ಅಭಿನಯಿಸಿರುವುದು.
ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಕಾವೇರಿ ಧಾರಾವಾಹಿಯ ಪೊಲೀಸ್ ಆಗಿ, ವಠಾರ ಧಾರಾವಾಹಿಯ ಕ್ಯಾಸ್ಸೆಟ್ ಕೃಷ್ಣಯ್ಯ(ನಕ್ಕಿರನ್ ಗೋಪಾಲ್) ಆಗಿ, ಚಿ. ಸೌ, ಸಾವಿತ್ರಿ ಧಾರಾವಾಹಿಯಲ್ಲಿ ಸಾವಿತ್ರಿಯ ತಂದೆ ಸೂರಪ್ಪನಾಗಿ, ದೇವಿ ಧಾರಾವಾಹಿಯಲ್ಲಿ ಚೆನ್ನಿಯ ತಂದೆ ಕುಡುಕ ಬಸಯ್ಯನಾಗಿ, ಉಘೇ ಉಘೇ ಮಾದೇಶ್ವರ ಧಾರವಾಹಿಯಲ್ಲಿ ಕುರುಡಿ ಗೌರಿಯ ತಂದೆ ಬಿದರಯ್ಯನಾಗಿ, ಜೀವನದಿ ಯಲ್ಲಿ ಪತ್ರಕರ್ತನಾಗಿ, ಕಾದಂಬರಿ ಕಣಜ ಮತ್ತು ಸರಿಗಮಪದನಿ ಗಳಲ್ಲಿ ನಾಯಕಿಯ ತಂದೆಯಾಗಿ, ಹೀಗೆ ನೂರಾರು ವೈವಿದ್ಯಮಯ ಪಾತ್ರಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳಲ್ಲಿ ಅಭಿನಯಿಸಿರುವುದು.
ಇತರೇ: 1) ಕರ್ನಾಟಕ ವೀರಶೈವ ಅರ್ಚಕರು ಮತ್ತು ಪುರೋಹಿತರ ಸಂಘದ ರಾಜ್ಯ ನಿರ್ದೇಶಕರು.
2) ಚಲನಚಿತ್ರ ಸೆನ್ಸಾರ್ ಮಂಡಳಿಯ ಮಾಜಿ ಸದಸ್ಯರು